ಜಿಲ್ಲಾ ದಿಶಾ ಸಮಿತಿಗೆ ದೊಡ್ಡಬಸವನಗೌಡ ಬಯ್ಯಾಪುರ, ನಂದಿತಾ ದಾನರೆಡ್ಡಿ, ಸರಸ್ವತಿ ಇಟ್ಟಂಗಿ, ಅಂಬಣ್ಣ ನಾಯಕ ನೂತನ ಸದಸ್ಯರು
ಕನ್ನಡಮ್ಮ ಸುದ್ದಿ-ಕೊಪ್ಪಳ: ಕೇಂದ್ರ ಮತ್ತು ರಾಜ್ಯ ಸರ್ಕಾರ ಪುರಷ್ಕೃತ ಯೋಜನೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ ಮಾಡುವ ಲೋಕಸಭಾ ಕ್ಷೇತ್ರರವರ ಅಧ್ಯಕ್ಷತೆಯ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (District Development Co- ordination and Monitoring Committee) (DDCMC-DISHA) ದಿಶಾ ಗೆ ನಾಲ್ಕು ಜನರನ್ನು ಸದಸ್ಯರನ್ನಾಗಿ ನೇಮಕ ಜಿ.ಪಂ ಸಿಇಒ ರಾಹುಲ್ ರತ್ನಂ ಪಾಂಡೇಯ. ಅವರು ಅಧಿಕೃತ ಜ್ಞಾಪನ ಪತ್ರದ ಮೂಲಕ ಆದೇಶಿಸಿದ್ದಾರೆ

ಸಂಸದರು ಹಾಗೂ ಅಧ್ಯಕ್ಷರು, ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷರಾದ ಕೆ.ರಾಜಶೇಖರ ಹಿಟ್ನಾಳ ಇವರ ಇವರ ಶಿಫಾರಸ್ಸು ಮೇರೆಗೆ ಸಮಾಜದ ವಿವಿಧ ಕ್ಷೇತ್ರಗಳ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಾಲ್ಕು ಜನರನ್ನು “ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (DDCMC-DISHA) ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ದಿಶಾ ಸಮಿತಿಗೆ ನೂತನವಾಗಿ ನೇಮಕಗೊಂಡವರು: ದೊಡ್ಡಬಸನಗೌಡ ಅಮರೇಗೌಡ ಬಯ್ಯಾಪೂರ ವಾರ್ಡ ನಂ. 04 ಬಸವೇಶ್ವರ ನಗರ, ಕುಷ್ಟಗಿ, ತಾ॥ ಕುಷ್ಟಗಿ ಜಿ॥ ಮೊ. 8095667777(ಎನ್ ಜಿ.ಒ),

ಸರಸ್ವತಿ ಗಂಡ ಕೃಷ್ಣಪ್ಪ ಇಟ್ಟಂಗಿ ವಾರ್ಡ ನಂ. 04, ಅಂಬೇಡ್ಕರ ವೃತ್ತದ ಹತ್ತಿರ, ಭಾಗ್ಯನಗರ, ತಾ॥ ಜಿ ಕೊಪ್ಪಳ, 9916642022 (ಪರಿಶಿಷ್ಟ ಜಾತಿ),
ಅಂಬಣ್ಣ ನಾಯಕ್ ಸಾ॥ ಬೆನ್ನೂರು ತಾ॥ ಕಾರಟಗಿ, 9008102092(ಪರಿಶಿಷ್ಟ ಪಂಗಡ),

ನಂದಿತಾ ಗಂಡ ಶಿವನಗೌಡ ದಾನರೆಡ್ಡಿ ವಾರ್ಡ ನಂ 15 ದಾನರೆಡ್ಡಿ ಆಸ್ಪತ್ರೆ ಕುದುರಿಕೊಟಗಿ ರಸ್ತೆ ಯಲಬುರ್ಗಾ ತಾ, 9449143663 (ಮಹಿಳೆ) ಇವರುಗಳು ದಿಶಾದ ನೂತನ ಸದಸ್ಯರಾಗಿ ನೇಮಕವಾಗಿದ್ದಾರೆ.
