ಕನ್ನಡಮ್ಮ ಸುದ್ದಿ-ಕೊಪ್ಪಳ : ಜೆಸ್ಕಾಂ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ 110 ಕೆವಿ ಎಂ.ಎಂ.ಯು.ಎಸ್ ಕೊಪ್ಪಳ ಸ್ಟೇಷನ್ ತುರ್ತು ನಿರ್ವಹಣೆ ಕೆಲಸ ನಡೆಸುತ್ತಿರುವ ಪ್ರಯುಕ್ತ ಈ ಸ್ಟೇಷನಗೆ ಒಳಪಡುವ ಎಲ್ಲ ಮಾರ್ಗಗಳಲ್ಲಿ ಜನವರಿ 5 ರಂದು ಬೆಳಿಗ್ಗೆ 10 ಗಂಟೆಯಿAದ ಮಧ್ಯಾಹ್ನ 02 ಗಂಟೆಯವ
ರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕೊಪ್ಪಳ ಸ್ಟೇಷನ್ಗೆ ಒಳಪಡುವ ಎಫ್-1 ಕಾಮನೂರ, ಎಫ್-3 ಎಸ್.ಜಿ ಕಾಲೇಜ್, ಎಫ್-5 ಬಗನಾಳ, ಎಫ್-6 ಬಸಾಪೂರ, ಎಫ್-8 ಭಾಗ್ಯನಗರ, ಎಫ್-9 ಬನ್ನಿಕಟ್ಟಿ, ಎಫ್-11 ಡಿಸಿ ಆಫೀಸ್, ಎಫ್-12 ತಾಲೂಕ ಪಂಚಾಯತ್, ಎಫ್-13 ಕಾಳಿದಾಸನಗರ. ಈ ಎಲ್ಲಾ ಫೀಡರ್ಗಳ 11 ಕೆವಿ ಲೈನ್ಗಳು ವಿದ್ಯುತ್ ವ್ಯತ್ಯಯವಾಗಲಿದ್ದು, ವಿದ್ಯುತ್ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಸೂಚಿಸಲಾಗಿದೆ. ಒಂದು ವೇಳೆ ವಿದ್ಯುತ್ ಅಫಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
