ಕನ್ನಡಮ್ಮ ಸುದ್ದಿ-ಕೊಪ್ಪಳ : ವಸತಿ ಯೋಜನೆಯ ಮನೆಗಳಿಗೆ ಗ್ರಾಮ ಪಂಚಾಯತಿಗಳಲ್ಲಿ ಜಿ.ಪಿ.ಎಸ್ ಅಳವಡಿಸುವ ಕುರಿತಂತೆ ಜನವರಿ 7 ಮತ್ತು ಜ. 8 ರಂದು ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಎಂಪಿಕ್ ವರದಿ ಪ್ರಕಾರ ಇನ್ನೂ ಪ್ರಾರಂಭಿಸದೇ ಇರುವ ಮನೆಗಳು 3532, ತಳಪಾಯ ಹಂತದಲ್ಲಿರುವ 5046, ಲಿಂಟಲ್ ಹಂತದಲ್ಲಿರುವ 4408 ಹಾಗೂ ಛಾವಣಿ ಹಂತದ 1867 ಮನೆಗಳು ಪ್ರಗತಿಯಲ್ಲಿವೆ. 
ವಿವಿಧ ವಸತಿ ಯೋಜನೆಗಳಡಿ 2010-11ನೇ ಸಾಲಿನಿಂದ 2022-23ನೇ ಸಾಲಿನವರೆಗೆ ಪೂರ್ಣಗೊಳ್ಳದೇ ಬಾಕಿ ಇರುವ ಎಲ್ಲಾ ಮನೆಗಳನ್ನು ಪೂರ್ಣಗೊಳಿಸಲು ವಸತಿ ಅನುಷ್ಮಾನಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಸೂಚಿಸಿದ್ದಾರೆ.
ವಸತಿ ಯೋಜನೆ ಗ್ರಾ.ಪಂ. ಗಳಲ್ಲಿ ಜನವರಿ 7 ಮತ್ತು 8 ರಂದು ಜಿಪಿಎಸ್ ವಿಶೇಷ ಅಭಿಯಾನ
Total Views 12
